ಅಸೈನ್ ಮೆಂಟ್-09
ಮನೆಯಿಂದಲೇ ಕೆಲಸದಡಿಯಲ್ಲಿ ವೃತ್ತಿ
ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವಿಕೆ ಕುರಿತಾಗಿ
೪೦೦ ಪದಗಳ ಲೇಖನ
|
ಇಂದು ಕೋವಿಡ್ – ೧೯ ಪ್ರಪಂಚವನ್ನೇ ನಲುಗಿಸುತ್ತಿದೆ. ಇಂತಹ
ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗಿ ವಿದ್ಯಾಬ್ಯಾಸ ಮಾಡುವುದು ಬಹಳ ಕಷ್ಟದ ವಿಷಯವಾಗಿದೆ. ಏಕೆಂದರೆ ಸೋಂಕು
ಹರಡುವ ಸಾಧ್ಯತೆ ಬಹಳಿಷ್ಟಿರುವುದರಿಂದ ಶಾಲಾ ಕಾಲೇಜುಗಳಿಗೆ ಸರಕಾರ ಎಲ್ಲಾ ಮಕ್ಕಳಿಗೆ ರಜೆ ಘೋಷಿಸಿದೆ.
ಈ ಸಂದರ್ಭದಲ್ಲಿ ಮಕ್ಕಳಿಗೆ ಸುಲಭವಾಗಿ ನಾವು ಶಿಕ್ಷಕರು
ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ಮಕ್ಕಳಿಗೆ ತಿಳಿಹೇಳುವ ಕೆಲವು ವಿಧಾನಗಳನ್ನು ನಾವು
ಅನುಸರಿಸುವುದು ಅನಿವಾರ್ಯವಾಗಿದೆ.
- ತಂತ್ರಜ್ಞಾನ ಆಧಾರಿತ ಶಿಕ್ಷಣದ
ಕಲಿಕೆ. – ನಾವು ಉತ್ತಮ ತಂತ್ರಜ್ಞಾನ ವನ್ನು ಬಳಸಿಕೊಂಡು ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ.
- ಅನ್ಲೈನ್ ತರಬೇತಿ : ಇಲಾಖೆಯ
ವತಿಯಿಂದ ನಡೆಯುವ ಅನ್ಲೈನ್ ತರಭೇತಿಗಳ ಮೂಲಕ ನಾವು ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ.
- ವಿಷಯಕ್ಕೆ ಸಂಬಂದಿಸಿದಂತೆ
ಪ್ರತಿ ಪಾಠಕ್ಕನುಗುಣವಾಗಿ ಬೋಧನೋಪಕರಣಗಳನ್ನು ತಯಾರಿಸಿಕೊಳ್ಳುವುದು.
- ಯೂಟೂಬ್, ದೀಕ್ಷಾ, ಅಮೃತ್
ಓ ಲ್ಯಾಬ್ , ಇನ್ನೂ ಕೆಲವು ಅಂತರಜಾಲ ಸೈಟ್‌ಗಳಿಗೆ ಭೇಟಿನೀಡಿ ಮಾಹಿತಿ ತಿಳಿದು ಕೊಳ್ಳುವುದು.
- ಚಂದನ ಟಿವಿ ಪ್ರಸಾರ ಮಾಡುವಂತಹ
ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿಕ್ಷಿಸಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ.
- ನಮ್ಮ ವಿಷಯಕ್ಕೆ ಸಂಬಂದಿಸಿದಂತೆ
ಪದವಿ ಪುಸ್ತಕಗಳನ್ನು ಅಭ್ಯಾಸ ಮಾಡುವುದರ ಮೂಲಕ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ.
- ಬೋದನಾ ತಂತ್ರಗಳನ್ನು ಸುಧಾರಣೆ
ಮಾಡಿಕೊಳ್ಳುವುದರ ಮೂಲಕ ನಮ್ಮ ವೃತ್ತಿ ನೈಪುಣ್ಯತೆಯನ್ನು
ಹೆಚ್ಚಿಸಿಕೊಳ್ಳಬೇಕಿದೆ.
- ಮಕ್ಕಳೊಂದಿಗೆ ನಿರಂತರ ಸಂಪರ್ಕ
ಸಾಧಿಸುವುದು, ವಿದ್ಯಾರ್ಥಿಗಳ ಕಲಿಕೆಗೆ ಬೇಕಾಗುವ ಕಲಿಕಾಂಶಗಳೊಂದಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡುವುದನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ವೃತ್ತಿ
ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ.
- ಹೀಗೆ ಹತ್ತು ಹಲವು ಚಟುವಟಿಕೆಗಳನ್ನು
ಶಿಕ್ಷಕರಾದ ನಾವು ಅನುಸರಿಸುವ ಮೂಲಕ ನಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ವೃತ್ತಿ
ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ.
No comments:
Post a Comment